ಭಾವದಾsssಲಹರಿಗೆ...-5

 ಅಂಬಾ... ಅಂಬಾ ಎನ್ನುತ್ತಾ ಅಂಬಾ ಗೌರಿಯ ಬಳಿ ಹೋಗಿ ತನ್ನ ಪುಟ್ಟ ಕೈಗಳಿಂದ ಹಸುವಿನ ಕುತ್ತಿಗೆಯನ್ನು ಬಳಸಿ ಆತುಕೊಂಡರೆ, ಅಂಬಾ ಗೌರಿಯು ತನ್ನ ನಾಲಿಗೆಯಿಂದ ತನ್ನದೇ ಕರುವನ್ನು ಸಂತೈಸುವಂತೆ ನೆಕ್ಕಿ ಮುದ್ದು ಮಾಡುತ್ತಿದ್ದಳು. 

ಸ್ವಲ್ಪ ಸ್ವಲ್ಪವೇ ದೊಡ್ಡವಳಾಗುತ್ತಿದ್ದ ಪುಟ್ಗೌರಿ ತಾನು ತಿನ್ನುವ ಮೊದಲು ಒಂದಿಷ್ಟಿಷ್ಟೇ ಹುಲ್ಲನ್ನು ಹಿಡಿದು ಅಂಬಾಗೌರಿಯ ಬಾಯಿಗೆ ಕೊಡುವುದು, ಬೆನ್ನು ಸವರುವುದು ರೂಡಿಯಾಗಿತ್ತು. ತನ್ನ ಅಮ್ಮ ನೊಡನೆ ಹಸುವಿನ ಮೈ ತೊಳೆಸಲು, ಕಲಗಚ್ಚು ಕಲೆಸಿಡಲು ಅಮ್ಮನಿಗೆ ನೆರವಾಗುತ್ತಿದ್ಲು.
 ಸುತ್ತಾ ಮುತ್ತಾ...ಪುಟ್ಗೌರಿ ಸ್ವಲ್ಪ ಹೊತ್ತು ಕಾಣದಿದ್ರೆ ಅಂಬಾSss ಅಂಬಾSss ಎಂದು ಚೀರುತ್ತಿದ್ದಳು. ಈ ಅಂಬಾ ಗೌರಿಗೂ ,ಪುಟ್ಗೌರಿಗೂ ತಾಯಿ-ಮಗಳಂತಹ ಅವಿನಾಭಾವ ಸಂಬಂಧ ! ಈ ಪುಟ್ಗೌರಿಯೂ ಅಷ್ಟೇ, ಅಂಬಾಗೌರಿ ಮಲಗಿದ್ದರೆ ಅವಳ ಹೊಟ್ಟೆಯ ಬಳಿ ಮಲಗಿ ನಿದ್ದೆ ಮಾಡಿಬಿಡುತ್ತಿದ್ದಳು! 
ಅಂಬಾಗೌರಿ ಬರೋಬ್ಬರಿ ಆರು ಕರುಗಳನ್ನು ಹೊತ್ತು, ಹೆತ್ತು ಮುದುಕಿಯಂತಾಗಿದ್ಲು ಗೌರಿ. ಹಾಲು ಕೊಡುವ ಪ್ರಮಾಣವೂ ಕಡಿಮೆಯಾಗಿತ್ತು. ಪುಟ್ಗೌರಿಗೆ ಹತ್ತು ವರ್ಷವಿದ್ದಾಗ ಅಂಬಾಗೌರಿ ಏಳನೇ ಬಾರಿಗೆ ಗರ್ಭ ಧರಿಸಿದ್ದಳು. ಪುಟ್ಗೌರಿಯ ಸಡಗರ,ನಲಿದಾಟ ಮುಗಿಲು ಮುಟ್ಟಿತ್ತು ! ಸದಾಕಾಲ ಅವಳ ಆರೈಕೆಯಲ್ಲೇ ಇದ್ದು ಬಿಡುತ್ತಿದ್ದಳು.
ಇತ್ತ ಪುಟ್ಗೌರಿಯ ಅಜ್ಜನವರೂ ವಯೋನಿವೃತ್ತಿಯಲ್ಲಿದ್ದರು. ಹಾಸಿಗೆ ಹಿಡಿದಿದ್ದ ಅಜ್ಜ ಒಂದುಕಡೆ,ತುಂಬು ಗರ್ಬಿಣಿಯಾಗಿದ್ದ ಅಂಬಾಗೌರಿ ಮತ್ತೊಂದು ಕಡೆ! ಮನೆಯಲ್ಲಿ ಒಂದು ರೀತಿಯ ರುದ್ರ ಮೌನದ ಬಿಗು ವಾತಾವರಣವಿತ್ತು!
ಸುಯ್ಯ್ ಎಂದು ಬೀಸುವ ಆಷಾಢದ ಗಾಳಿ! ಅಂಬಾಗೌರಿಯ ಹಿಂಬದಿಗೆ ..ಮೈ ಮೇಲೆ ಬೆಚ್ಚಗಿನ ಗೋಣಿ ಚೀಲವನ್ನು ಹಾಸಿ ಬಂದು ಮಲಗಿದ್ದಾಗಿತ್ತು. ತಾಸಿಗೊಮ್ಮೆ ಅಪ್ಪ ಬಾಗಿಲ ಚಿಲಕ ತೆಗೆದು ಗೌರಿಯ ಸ್ಥಿತಿನೋಡಿ ಬರುತ್ತಿದ್ದ ! 
ತೊಟ್ಟಿಲಿನ ಅಂಗಡಿಯಲ್ಲಿ ಬೊಂಬು ತುಂಬಾ ಅಗ್ಗ ನೋಡಿ !
ರಾತ್ರಿ ಮೂರರ ಹೊತ್ತು! ಜೋರಾಗಿ ಒಮ್ಮೆ ಅಂಬಾSsss ಎಂದು ಛೀರಿದಳು ಅಂಬಾ! ಮನೆಯವರೆಲ್ಲಾ ದೌಡಾಯಿಸಿದರು ! ಕರುವು ಶತ್ತೆ( ಗರ್ಭದ ಚೀಲ)ಯ ಸಮೇತ ಹೊರಗೆ ಬಿದ್ದಿತ್ತು! ರಕ್ತದ ಕೋಡಿ ಹರಿದಿತ್ತು! ಅಂಬಾ ಗೌರಿ ಕುಸಿದು ಚಿರನಿದ್ರೆಗೆ ಜಾರಿಬಿಟ್ಟಳು.
ತೋಟದಲ್ಲಿದ್ದ ಆಳುಗಳ ಸಹಾಯದಿಂದ ಅಂಬಾ ಹಸುವನ್ನು ಹೂತು , ಸಂಸ್ಕಾರವನ್ನು ಮಾಡಿ , ನವಜಾತ ಕರುವನ್ನೂ, ಕೊಟ್ಟಿಗೆಯನ್ನೂ ತೊಳೆದು ಮನೆಯೊಳಗೆ ಬಂದರೆ ಅಲ್ಲಿಯೂ ನೀರವ ಮೌನ! ಇತ್ತ ಹಾಸಿಗೆಯ ಮೇಲಿದ್ದ ಅಜ್ಜನವರೂ ಅಲುಗಾಡದೆ ತಣ್ಣನಾಗಿದ್ದರು! ಮನೆಯಲ್ಲಿ ಎರೆಡೆರೆಡು ಶಾಂತವಾದ ಸಾವು ! 
 ಬೆಳಿಗ್ಗೆ ಆರರ ಸಮಯ... ಪುಟ್ಟ ಬಿಳಿ ಕರುವಿಗೆ ಬಾಟಲಿನಲ್ಲಿ ಹಾಲು ಕುಡಿಸಿ  ಪುಟ್ಗೌರಿಯ ಅಮ್ಮ ಮನೆಯೊಳಗೆ ಬರುತ್ತಿದ್ದರೆ, ಪುಟ್ಗೌರಿ ಕಣ್ಣನ್ನೊಮ್ಮೆ ಉಜ್ಜಿಕೊಂಡು ಮೆಲ್ಲಗೆ ಮಂಚದಿಂದ ಇಳಿದು ಯಥಾಪ್ರಕಾರ ಅಂಬಾ ಗೌರಿಯನ್ನು ನೋಡಲೆಂದು ಹೋದಳು! 
ಸಾವಿನ ವಿಷಯವನ್ನು ಕೇಳಿ ಅವಳಿಗಾದ ಆಘಾತ ಅಷ್ಟಿಷ್ಟಲ್ಲ !. ನನಗೆ ಕಥೆ ಹೇಳುತ್ತಿದ್ದ ಅಜ್ಜ, ಆ ಕಥೆಯನ್ನು ನನ್ನಿಂದ ಕೇಳಿಸಿಕೊಳ್ಳುತ್ತಿದ್ದ ಅಂಬಾSs ಇಬ್ಬರೂ ಇಲ್ಲ ! ಅರೆರೆ ! ನಿನ್ನೆ ಕಣ್ಣು ಮುಚ್ಚಿದ್ದಾಗ ಇಬ್ಬರೂ ಇದ್ದರು..ಈಗ ಇಲ್ಲ ! ಪುಟ್ಗೌರಿಯ ಕಣ್ಣುಗಳಲ್ಲಿ ಅದೆಂಥದ್ದೋ ಆಡಲಾರದ ನೋವು!, ತಳಮಳ ! ಕಾಣಿಸುತ್ತಿತ್ತು.
ಅಪ್ಪ, ಪುಟ್ಗೌರಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ನೋಡು ಕಂದಾ! ನೀನು ನನಗೊಂದು ಪುಟ್ಟ ಕರು ಬೇಕು ಅಂತ ಯಾವಾಗ್ಲೂ ಹಠ ಮಾಡ್ತಿದ್ಯಲ್ಲಾ! ಪುಟ್ಟಂಬಾನೇ ಪುಟ್ಟ ಕರುವಾಗ್ಬಿಟ್ಡಿದೆ ಎಂದು ಸಮಾಧಾನ ಮಾಡಿದ! . 

ಪುಟ್ಗೌರಿ, ಕರುವಿನ ತಲೆ ನೇವರಿಸುತ್ತಾ, ಹಾಲು ಕುಡಿಸುತ್ತಾ ಹುಲ್ಲು ಮೇಯಿಸುತ್ತಾ, ಜೊತೆ ಜೊತೆಗೆ ಬೆಳೆಯುತ್ತಾ ಇಬ್ಬರೂ ಪೌಢಾವಸ್ಥೆಗೆ ಬಂದರು. ಇವಳ ಸಂತೋಷಕ್ಕಂತೂ ಪಾರವೇ ಇಲ್ಲ! ಪುಟ್ಗೌರಿ ದಾಸರಪದಗಳು, ಕಥೆಗಳನ್ನು ಹೇಳುತ್ತಿದ್ದರೆ, ಪುಟ್ಟಂಬಾ ಗೌರಿ ತಲೆಯಾನಿಸುತ್ತಾ, ಹೂಂಗುಡುತ್ತಾ ...ಭೂಲೋಕ ಸ್ವರ್ಗವೆಂದೆನಿಸಿತ್ತು! 

*ಪ್ರಜಯಾ ಪಶುಬಿಃ ಮಿಥುನೈರ್ ಜಾಯತೇ*

-ಕೌಸ್ತುಭಾ ಭಾರತೀಪುರಂ
ವಕೀಲೆ


Comments

Popular posts from this blog