Posts

Image
ಭಾವದಾsssಲಹರಿಗೆ...-5   ಅಂಬಾ... ಅಂಬಾ ಎನ್ನುತ್ತಾ ಅಂಬಾ ಗೌರಿಯ ಬಳಿ ಹೋಗಿ ತನ್ನ ಪುಟ್ಟ ಕೈಗಳಿಂದ ಹಸುವಿನ ಕುತ್ತಿಗೆಯನ್ನು ಬಳಸಿ ಆತುಕೊಂಡರೆ, ಅಂಬಾ ಗೌರಿಯು ತನ್ನ ನಾಲಿಗೆಯಿಂದ ತನ್ನದೇ ಕರುವನ್ನು ಸಂತೈಸುವಂತೆ ನೆಕ್ಕಿ ಮುದ್ದು ಮಾಡುತ್ತಿದ್ದಳು.  ಸ್ವಲ್ಪ ಸ್ವಲ್ಪವೇ ದೊಡ್ಡವಳಾಗುತ್ತಿದ್ದ ಪುಟ್ಗೌರಿ ತಾನು ತಿನ್ನುವ ಮೊದಲು ಒಂದಿಷ್ಟಿಷ್ಟೇ ಹುಲ್ಲನ್ನು ಹಿಡಿದು ಅಂಬಾಗೌರಿಯ ಬಾಯಿಗೆ ಕೊಡುವುದು, ಬೆನ್ನು ಸವರುವುದು ರೂಡಿಯಾಗಿತ್ತು. ತನ್ನ ಅಮ್ಮ ನೊಡನೆ ಹಸುವಿನ ಮೈ ತೊಳೆಸಲು, ಕಲಗಚ್ಚು ಕಲೆಸಿಡಲು ಅಮ್ಮನಿಗೆ ನೆರವಾಗುತ್ತಿದ್ಲು.  ಸುತ್ತಾ ಮುತ್ತಾ...ಪುಟ್ಗೌರಿ ಸ್ವಲ್ಪ ಹೊತ್ತು ಕಾಣದಿದ್ರೆ ಅಂಬಾSss ಅಂಬಾSss ಎಂದು ಚೀರುತ್ತಿದ್ದಳು. ಈ ಅಂಬಾ ಗೌರಿಗೂ ,ಪುಟ್ಗೌರಿಗೂ ತಾಯಿ-ಮಗಳಂತಹ ಅವಿನಾಭಾವ ಸಂಬಂಧ ! ಈ ಪುಟ್ಗೌರಿಯೂ ಅಷ್ಟೇ, ಅಂಬಾಗೌರಿ ಮಲಗಿದ್ದರೆ ಅವಳ ಹೊಟ್ಟೆಯ ಬಳಿ ಮಲಗಿ ನಿದ್ದೆ ಮಾಡಿಬಿಡುತ್ತಿದ್ದಳು!  ಅಂಬಾಗೌರಿ ಬರೋಬ್ಬರಿ ಆರು ಕರುಗಳನ್ನು ಹೊತ್ತು, ಹೆತ್ತು ಮುದುಕಿಯಂತಾಗಿದ್ಲು ಗೌರಿ. ಹಾಲು ಕೊಡುವ ಪ್ರಮಾಣವೂ ಕಡಿಮೆಯಾಗಿತ್ತು. ಪುಟ್ಗೌರಿಗೆ ಹತ್ತು ವರ್ಷವಿದ್ದಾಗ ಅಂಬಾಗೌರಿ ಏಳನೇ ಬಾರಿಗೆ ಗರ್ಭ ಧರಿಸಿದ್ದಳು. ಪುಟ್ಗೌರಿಯ ಸಡಗರ,ನಲಿದಾಟ ಮುಗಿಲು ಮುಟ್ಟಿತ್ತು ! ಸದಾಕಾಲ ಅವಳ ಆರೈಕೆಯಲ್ಲೇ ಇದ್ದು ಬಿಡುತ್ತಿದ್ದಳು. ಇತ್ತ ಪುಟ್ಗೌರಿಯ ಅಜ್ಜನವರೂ ವಯೋನಿವೃತ್ತಿಯಲ್ಲಿದ್ದರು. ಹಾಸಿಗೆ ಹಿಡಿದಿದ್ದ...
Image
 ಭಾವದಾsssಲಹರಿಗೆ...-4 ಬದುಕೆಷ್ಟು ಹತ್ತಿರ  !!!! ಲಲಿತೆಗಿನ್ನೂ 4 ವರ್ಷ. ಮುದ್ದಾದ ಹಾಲು ಬಿಳುಪಿನ ಗುಂಡು ಮುಖ, ದಟ್ಟವಾದ ಕಪ್ಪು ಕೂದಲು, ಎರಡು ಉದ್ದನೆಯ ಜಡೆಯನ್ನು ಮೇಲಕ್ಕೆ ಕಟ್ಟಿ ,ದುಂಡಾದ ಕಾಕಡ, ಕನಕಾಂಬರವನ್ನು ಮುಡಿಸಿ, ಕಣ್ಣಿಗೆ ಕಾಡಿಗೆ ಇಟ್ಟು , ಬಲಗೆನ್ನೆಯ ಮೇಲೊಂದು ಚುಕ್ಕೆ ಇಟ್ಟು , ತನ್ನ ಸೀರೆಯಿಂದಲೇ ಹೊಲಿದ, ಉದ್ದನೆಯ ರೇಷ್ಮೆ ಲಂಗ, ರವಿಕೆ...ಕೈ ತುಂಬಾ ಝಲ್ ಝಲ್ ಅನ್ನುವ ಬಳೆ ತೊಡಿಸಿ ಆಟ ಆಡ್ಕೋ ಹೋಗು ಎಂದು ಮುತ್ತಿಡುತ್ತಿದ್ದಳು ಲಲಿತೆಯ ಅಮ್ಮಾ !! ಥೇಟ್ ಗೊಂಬೆಯಂತೆಯೇ ಕಾಣುತ್ತಿದ್ದ ಲಲಿತಾಗೆ ನೃತ್ಯ ಮಾಡುವುದೆಂದರೆ ಪಂಚಪ್ರಾಣ, ಅವಳ ಪ್ರತೀ ಮಾತು , ಭಂಗಿ, ಭಾವವನ್ನೆಲ್ಲಾ ನೆಂಟರಿಷ್ಟರು, ಸ್ನೇಹಿತರಷ್ಟೇ ಅಲ್ಲ ದಾರಿಹೋಕರೂ, ದೇವಾಲಯದ ಭಕ್ತರ ಮಹಾಪೂರ ಕಣ್ತುಂಬಾ ಸೆರೆಹಿಡಿದುಕೊಂಡು ಕೊಂಡಾಡುತ್ತಿದ್ದರು !  ಮನೆಯ ಪಕ್ಕದಲ್ಲೇ ಹೊಯ್ಸಳರ ಶೈಲಿಯ ಬೃಹತ್ ಗುಡಿಯ ಮುಂದೆ ತೋಚಿದ್ದನ್ನೆಲ್ಲಾ ನರ್ತಿಸುತ್ತಿದ್ದಳು ಲಲಿತೆ ! ಅಪ್ಪ ರಾಮದಾಸ ಅದೇ ದೇಗುಲದ ಅರ್ಚಕ, ನೃತ್ಯದಲ್ಲೇ ತಲ್ಲೀನಳಾಗಿ ದಣಿದು ಬಂದ ಕೂಸನ್ನು ಪ್ರಸಾದ ತಿನ್ನಿಸಿಕೊಂಡು ,ಹೆಗಲಮೇಲೆ ಕೂರಿಸಿಕೊಂಡು, ನವಿಲನ್ನೇ ಹೊತ್ತು ಮೆರೆಯುತ್ತಿರುವ ಭಾವದಿಂದ ನಲಿದಾಡುತ್ತಾ ಹಿಗ್ಗಿನಿಂದ ಮನೆ ತಲುಪುತ್ತಿದ್ದ ! ಅವನ ಬದುಕಿನಲ್ಲಿ ಲಲಿತೆಯ ಹೊರತು ಬೇರೇನೂ ಮಹತ್ತಿರಲಿಲ್ಲ !. ಲಲಿತೆಗೀಗ 6 ವರ್ಷ, ಬದುಕೆಷ್ಟು ದೂರ ಎಂದುಕೊಳ್ಳುತ್ತಿದ್ದ! ..ಕಾಲ ಉರು...
Image
   ಭಾವದಾsssಲಹರಿಗೆ... 3 ಒಡಲು ರಿ ಚಿಟಪಟ ಮಳೆಯಲಿ ತೋಯ್ದು ಹೋಗಿದ್ದಳು ಭಾಗೀರತಿ! ನೆತ್ತಿಯ ಮೇಲಣ ಸಣ್ಣ ಸಣ್ಣ ಕಪ್ಪು ಕೂದಲಿನ ಮೇಲೆ ಧೋ ಎಂದು ಸುರಿದ ಮಳೆ ! ಕಣ್ಣೀರನ್ನೂ ಕರಗಿಸಿಬಿಟ್ಟಿತ್ತು. '...ಮುಂಡೇದೆ ನಿಂಗ್ಯಾಕ್ ಬಂತೇ ಈ ದುರ್ಬುದ್ದಿ , ತೊಲ್ಗು ..' ಅಂತ ಇವಳಕ್ಕ ಗೌರಮ್ಮ ಮನೆಯಿಂದ ಇವಳನ್ನು  ಹೊರಗೆ ದಬ್ಬಿ  ಬಡಿದ ಬಾಗಿಲಿನ  ಡಬ್ ಎಂಬ ಸದ್ದು , ಬಾಗಿಲಿನ ಹಿಂದೆ ಅಕ್ಕ ಕುಳಿತು ರೋಧಿಸುತ್ತಿದ್ದ ಸದ್ದು ಇನ್ನೂ ಇವಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು... ಮುರುಕಲು ಮನೆ ಮುಂದಣ ಛಾವಣಿಯಿಂದ ಮಳೆ ನೀರು ತೊಟ್ಟಿಕ್ಕುತ್ತಿತ್ತು!. ಇವಳ ಇಡೀ ದೇಹವನ್ನು ಸುತ್ತಿದ್ದು 9 ಗಜದ ಒಂದು ಕೆಂಪು ಸೀರೆ ಮಾತ್ರ ! ಗೌರಮ್ಮ ಮನೆಯ ಹಿರಿಯ ಮಗಳು, ನಂತರ ಸಾಲಾಗಿ ಏಳು ತಮ್ಮಂದಿರು! ಅವರವರ ಪಾಡಿನ‌ ಜಾಡು ಹಿಡಿದದ್ದಾಗಿದೆ. ಕೊನೆಯಲ್ಲಿ ಹುಟ್ಟಿದವಳೇ ಈ ಬೆಡಗು ಕಣ್ಣಿನ ಹುಡುಗಿ   ಭಾಗೀರತಿ !  ಗೌರಮ್ಮನ ಅಪ್ಪ ಮಹಾನ್ ಮುಂಗೋಪಿ, ಬಂಡೆಯನ್ನೇ ಎತ್ತಬಲ್ಲ ಕಟ್ಟಾಳು ! ಬಡತನ, ದುಡಿಮೆಯಿಲ್ಲದ ಬದುಕು!, ಹಸಿವನ್ನು ನೀಗಿಸೋದಕ್ಕೆ  6 ವರ್ಷದ ಗೌರಮ್ಮನ್ನ 24 ವರ್ಷದ ಗಂಡಿಗೆ ವಧುದಕ್ಷಿಣೆ ಪಡೆದು ಮದುವೆ ಮಾಡಿದ! ಅಸಲಿಗೆ ಮಾರಿದ್ದು ಅಂತಲೇ ಅನ್ನಬಹುದು! ಆ ಗಂಡೋ ತನ್ನ 34 ನೇ ವಯಸ್ಸಿಗೆ ಕ್ಷಯರೋಗದಿಂದ ಗೊಟಕ್ ಎಂದುಬಿಟ್ಟ!  ಇತ್ತ ಭಾಗೀರತಿಯ ಕತೆಯೂ ಹೀಗೆಯೇ...! 54 ನೇ ವಯಸ್ಸಿನಲ್ಲಿದ್ದ ಒಬ್ಬ...
Image
  ಭಾವದಾsssಲಹರಿಗೆ...-2 ಲೋಪ ಸಾಗರ ಅವಳೋ...ಅವಳೇ ಒಂದು ಚಿಲಿಪಿಲಿ ಹಾಡು ಹಕ್ಕಿ..  'ಲೋಪ ಮುದ್ರಾ',  ಸಾಗರನ ಸೋದರತ್ತೆ ಮಗಳು. ಇವನೆಷ್ಟು ಮೌನಿಯೋ ಅವಳಷ್ಟೇ ಧೋ ಎಂದು ಸುರಿವ ಚಿಟಪಟ ಮಳೆ. ಅವಳ ಮನೆ ಇವನ ಮನೆಯ ಒಂದೆರೆಡು ಬೀದಿ ಆಚೆ ಈಚೆ. ಚೆಂದದ ಲಂಗದಾವಣಿ, ಕಿವಿಯಲ್ಲಿ ಜುಮುಕಿ, ಕೈತುಂಬಾ ಬಳೆ, ದಟ್ಟವಾದ ಉದ್ದ ಜಡೆ, ಜಡೆಯಲ್ಲಿ ಮಲ್ಲಿಗೆ ಮೊಗ್ಗು, ಕಾಲಲ್ಲಿ ಜಲ್ ಜಲ್ ಅನ್ನೋ ಗೆಜ್ಜೆ... ಇವಳು ಸಾಗರನಿಗಷ್ಟೇ ಪ್ರಪಂಚವಲ್ಲಾ... ಅವನು ಅವರ ತೊಟ್ಟೀಮನೆ ಸುತ್ತ ನೇತು ಹಾಕಿದ್ದ ಪಂಜರಗಳಲ್ಲಿನ ಹಕ್ಕಿಗಳೂ ಇವಳ ಗೆಜ್ಜೆ ಸದ್ದಿಗೆ ಚೀಂವ್ ಚೀಂವ್ ಅಂತ ನಲಿದು ಹಾಡುತ್ತಿದ್ದವು.  ನಾಳೆ ಎಕ್ಸಾಮ್ ಕಣೇ... ಒಂದೆರೆಡ್ ದಿನ ನೀನು ಈ ಕಡೆ ಬಂದು ಡಿಸ್ಟರ್ಬ್ ಮಾಡ್ಬೇಡ..ನೀನೂ ಓದ್ಕೋ ಇಲ್ಲದಿದ್ರೆ ಮೆಡಿಕಲ್ ಸೀಟ್ ಸಿಗಲ್ಲ ಅಂತ ಹೇಳಿ ಫೋನ್ ಇಡೋಷ್ಟ್ರಲ್ಲಿ ಅವಳು ಸುಯ್ಯ್...ಅಂತ ಸುಳಿದು ಹಿಂದಿನಿಂದ ಅವನನನ್ನೊಮ್ಮೆ ಬಳಸಿ ,ಕಿವಿಯಲ್ಲಿ ಕೂಂ...ಅಂತ ಕಿರುಚಿ ತಲೆಯನ್ನೊಮ್ಮೆ ಕೆದರಿ ಪುಟ ಪುಟ ಅಂತ ಅಡುಗೆ ಮನೆಗೆ ಓಡಿಬಿಡ್ತಿದ್ಲು. ಲೋಪಳೂ ಎಂದೆಂದೂ ಶಾಲೆಗೆ ಟಾಪರ್ ಆಗಿಯೇ ಉಳಿವ, ಲವಲೇಶವೂ ಲೋಪವಿರದ ಹುಡುಗಿ. ಕೊಳಲನೂದುತ ತೊಟ್ಟಿಮನೆ ಮಧ್ಯೆ ಇದ್ದ ತುಳಸೀ ಕಟ್ಟೆಯ ಮುಂದೆ ಕೂತು ಬಿಟ್ರೆ ಮಳೆ ಬಂದು ನಿಂತ ಅರಿವೇ ಇರ್ತಿರ್ಲಿಲ್ಲ... ಸಾಗರನೂ ಹಾಡುತ್ತಾ..ಅವಳೆದುರು ಕಳೆದುಹೋಗ್ತಿದ್ದ.. ಇದ್ದಕ್ಕಿದ್ದ ಹಾಗೇ ಲೋಪಳ ಬದುಕಿಗೆ ಅವರಪ್...
Image
  ಭಾವದಾSSSಲಹರಿಗೆ..... -1 ಗುಲ್ಮೊಹರ ಸೂರ್ಯ ಮುಳುಗೋ ಹೊತ್ತು.ಇಪ್ಪತ್ತೆರೆಡರ ವಯಸ್ಸು!  ದಾರಿಯಲ್ಲಿ ಬಿದ್ದ ಕೇಸರಿ ಗುಲ್ಮೊಹರದ ಹೂವುಗಳನ್ನ ಆರಿಸಿ ತಂದು ಮನೆಯ ಕಿಟಕಿಯ ಪಕ್ಕ ಇಡ್ತಿದ್ದ.ಎದುರು ಮನೆಗೆ ಬಂದಿರೋ ಉದ್ದ ಜಡೆಯ ಹುಡುಗಿ ,ಕಾದು ಯಾವುದೋ ಮಾಯದಲ್ಲಿ ಮೆಲ್ಲಗೆ ಕಾಲು ಗೆಜ್ಜೆಯನ್ನಷ್ಟೇ ಜ಼ಲ್ ಜ಼ಲ್ ಸದ್ದು ಮಾಡಿ ತೊಗೊಂಡು ಹೋಗ್ತಿದ್ಲು... ಆಹಾ!! ಗುಲ್ಮೊಹರ ಅಲ್ಲಿ ಇಲ್ಲದ್ದನ್ನ ನೋಡಿದ ತಕ್ಷಣ ಇವನ ಹೂವಿನಂತ ಮನಸ್ಸು ಹಗುರಾಗಿ ತೇಲಿದಂತಾಗ್ತಿತ್ತು.  'ಯಾಕೋ ಪೆದ್ದ್ ಪೆದ್ದಾಗಿ ನಗ್ತೀಯಾ, ಏನೋ ಆಗಿದೆ ಇವ್ನಿಗೆ...ಮೇಲ್ ಹೋಗಿ ಬಟ್ಟೆ ತೊಗೊಂಡ್ ಬಾ ಅನ್ನೋವ್ಳು ಅಮ್ಮಾ!  ಇವ ಸಿಕ್ಕಿದ್ದೇ ಚಾನ್ಸ್ ಅಂತ ಓಡಿ ಹೋಗ್ತಿದ್ದ. ಅವಳು ಮನೆಯ ವರಾಂಡದಲ್ಲಿ ಬೆಕ್ಕು, ನಾಯಿಯ ಜೊತೆ ಆಡಿಕೊಂಡು ಕಿರುಗಣ್ಣಿಂದ ಇವನನ್ನ ಗಮನಿಸ್ತಿದ್ಲು.. ಹಾಗೇ ಆಕೆ ನೋಡಿದಾಕ್ಷಣ ಹೃದಯದ ಬಡಿತ ಹೆಚ್ಚಾಗಿಬಿಡ್ತಿತ್ತು...  'ದೀಪ ಹಚ್ಚಿದ್ದಾದ್ಮೇಲೂ ಹೊರಗ್  ಏನ್ ಮಾಡ್ತಿದ್ದೀಯಾ..ಒಳಗ್ ಬಾ' ಅನ್ನೋ ಸದ್ದು ಕೇಳಿ ಒಳಗೆ ಅವಿತರೆ ನಾಳೆ ಸಂಜೆಯವರೆಗೂ ಅವಳ ದರ್ಶನವಿರುತ್ತಿರಲಿಲ್ಲ. ಸೂರ್ಯ ಮುಳುಗೋ ಹೊತ್ತು, ದಾರಿಯಲ್ಲಿ ಗುಲ್ ಮೊಹರವಿತ್ತು. ನೋಡುತ್ತಲೇ ನಿಂತ! ಅವಳ ಮನೆ ಬಾಗಿಲು ಮುಚ್ಚಿತ್ತು! ತುಂತುರು ಮಳೆ ಹನಿಯಲ್ಲಿ ಹಿತವಿರಲಿಲ್ಲ.. ಅದೊಂದು ಕೆಟ್ಟ ದಿನ ! ಕಿಟಕಿಯ ಪಕ್ಕ ಇಟ್ಟಿದ್ದ ಗುಲ್ಮೊಹರವನ್ನ ತೆಗೆದುಕೊಂಡು ಹೋಗುವಾಗ ...